ಚಂದಿರ ನೀಲಿಯಾಗುವ ಹೊತ್ತು...
ಚಂದಿರ
ನೀಲಿಯಾಗುವ ಹೊತ್ತು...
ನೀಲಿ
ಕಂಗಳ ಚೆಲುವೆಯ ನೆನಪಿಗೆ
ಮನಸ್ಸು
ಹಾತೊರೆಯುತ್ತಿತ್ತು...
ಅವಳದೇ
ನೆನಪಲ್ಲಿ
ಚಂದಿರನ
ಹಾಲು ಬೆಳದಿಂಗಳ ನೆರಳಲ್ಲಿ
ಕಣ್ಣಾಮುಚ್ಚಾಲೆಯಾಡುವ
ಕನಸ್ಸು ಹೊತ್ತು..
ಕಪ್ಪು
ಮೋಡಗಳ ಮರೆಯಲ್ಲಿ ನಿಂತು
ನನ್ನನ್ನೇ
ದಿಟ್ಟಿಸಿ ನೋಡಿ ಕಣ್ಣು ಮಿಟುಕಿಸಿ
ಬಾ
ಎಂದು ಕರೆದಂತ ನೆನಪು...
ಕೈ
ಹಿಡಿದು ನಡೆವಾಗ ತುದಿ ಬೆರಳ
ಸ್ಪರ್ಶಿಸಿ
ಪುಳಕಗೊಂಡವನ ಕೆನ್ನೆಗೆ
ಮೃದು
ಕೈಯಲ್ಲಿ ತಟ್ಟಿ ಹೋದವಳ ನೆನಪು
ಕೋನು
ಐಸ್ ಕ್ರೀಮೊಳಗೆ ಮಿಂದಿದ್ದ
ತುಟಿಗಳನ್ನುನೋಡುತ್ತಾ
ಕೆನ್ನೆಗಂಟಿದ್ದ ಕ್ರೀಮನ್ನು
ಕರ್ಚೀಫಿನಿಂದೊರೆಸಿ
ಯಾರಿಗೂ
ಕಾಣದಂತೆ ಕರ್ಚೀಫಿಗೊಂದು
ಮುತ್ತುಕೊಟ್ಟ
ಕಳ್ಳ ನೆನಪು.....
ಕೆಂಪಾಗಿದ್ದ
ಕಣ್ಣುಗಳನ್ನು ಮುಚ್ಚಿದರೆ ಸಾಕು
ಆ
ನೆನಪುಗಳನ್ನೇ ನೆನೆಯುತ್ತಿತ್ತು...
ಚಾಚಿದ ಅವಳ
ಅಂಗೈ ಮೇಲೆ
ಧಾರೆಯೆರೆಯುವಾ
ಹೊತ್ತು...
ನೆನ್ನೆಗಳನ್ನು ನೆನೆದು ಮನಸ್ಸು ಅಳುತ್ತಲಿತ್ತು...
ಈಗಲೂ
ಅಳುತ್ತಲೇ ಇದೆ ನೆನಪುಗಳಾ ಹೊತ್ತು..
ಇದು
ಚಂದಿರ
ನೀಲಿಯಾಗುವಾಹೊತ್ತು
No comments:
Post a Comment