ಅದು
ಮಾನಸ ಗಂಗೋತ್ರಿಯ ಗ್ರಂಥಾಲಯ
ಮತ್ತು ಮಾಹಿತಿ ವಿಜ್ಞಾನ ವಿಭಾಗ...
1965, ಜೂನ್
24ರಂದು
ಜನ್ಮ ತಳೆದ ಕೂಸಿಗೀಗ 50ರ
ಹರೆಯ...
ಅಗಾಧವಾಗಿ
ಬೆಳೆದು ನಿಂತ ಈ ಆಲದ ಮರದ ಒಂದು
ಎಲೆ ನಾನು ಕೂಡಾ ಅಂತಾ ಹೇಳ್ಕೊಳ್ಳೋಕೆ
ಏನೋ ಒಂಥರಾ ಖುಷಿ ಅನ್ಸುತ್ತೆ...
ಸಾವಿರಾರು
ಸಾಮಾನ್ಯರನ್ನ ತನ್ನೊಳಗೆ
ತೆಗೆದುಕೊಂಡು ಅಸಾಮಾನ್ಯರನ್ನಾಗಿಸಿದ,
ಜ್ಞಾನ
ಬುತ್ತಿಯನ್ನುಣಿಸಿದ ಅಕ್ಷಯ
ಪಾತ್ರೆ....
ಇದರ
ಬಿಳಲುಗಳಲ್ಲಿ ಜೀಕಾಡಿ ಕಲಿತು
ಬೆಳೆದ ಕಂದಮ್ಮಗಳ ಮುಂದೆ ನಸುನಗುತ್ತಾ
ನಿಂತಿರುವ ಈ ಮುತ್ಸದ್ಧಿ ಇದೇ
24ನೇ
ತಾರೀಖು ತನ್ನ ಕುಟುಂಬದವರ ಜೊತೆ
ಜನ್ಮದಿನವನ್ನು ಆಚರಿಸಿಕೊಳ್ತಾ
ಇದೆ...
ಇಡೀ
ಕುಟುಂಬ ಅವತ್ತು ಒಂದು ಕಡೆ ಸೇರ್ತಾ
ಇದೆ...
ಕುಟುಂಬದ
ಹಿರಿಯರು ತಮ್ಮ ಅನುಭವವನ್ನು
ಕಿರಿಯರ ಮುಂದೆ ಹಂಚಿಕೊಳ್ತಾರೆ...
ಆದ್ರೆ
ಅದರಲ್ಲಿ ಪಾಲ್ಗೊಳ್ಳೋಕಾಗ್ತಾ
ಇಲ್ಲ ಅನ್ನೋ ಸಂಕಟ ನನ್ನದು...
ಆದರೆ
ನೆನಪುಗಳು ಮಾತ್ರ ಎಂದೂ ಬತ್ತದ
ಜೀವಸೆಲೆಯಂತೆ ಉಮ್ಮಳಿಸಿ
ಬರುತ್ತಿವೆ..
2008ರಲ್ಲಿ
ಅರೇ..
‘ಹೀಗೂ
ಒಂದು ವಿಷಯಾ ಇದ್ಯಾ..’
ಅಂತಾ
ಕುತೂಹಲದಿಂದ ಕೋರ್ಸಿಗೆ ಸೇರಿದ
ನಮಗೆ ಅದು ವಿಷಯ ಅಲ್ಲಾ ವಿಶ್ವಕೋಶ
ಅಂತಾ ಆದಷ್ಟು ಬೇಗನೇ ತಿಳಿತು...ಇಡೀ
ಯೂನಿವರ್ಸಿಟಿಯ ವಿದ್ಯಾರ್ಥಿಗಳು
ಲೈಬ್ರರಿಗೆ ಬರ್ತಾ ಇದ್ರೆ...
ನಾವು
ಅದರೊಳಗೇ ಇದ್ದಿದ್ದು ಇನ್ನೊಂದು
ಹೆಮ್ಮೆಯ,
ಗರ್ವದ
ವಿಷಯವಾಗಿತ್ತು...
ಎಲ್ಲಾ
ಸಬ್ಜೆಕ್ಟ್ ಗಳು (disciplines)
ನಮಗೆ
ನಂಬರ್ ಗಳ ರೂಪದಲ್ಲಿ ಕಾಣಿಸ್ತಿದ್ವು...
DDC, UDC, CC, Cataloging..... ಬಹುಷಃ
ನಾವೆಷ್ಟೇ Explain
ಮಾಡಿದ್ರೂ
ಬೇರೇ ಡಿಪಾರ್ಟ್ಮೆಂಟ್ ನ ಹುಡುಗರಿಗೆ
ಇವೆಲ್ಲಾ ಅರ್ಥವಾಗದೇ ಇದ್ದಾಗ...
ನಾವೇನೋ
ವಿಶೇಷವಾದದ್ದನ್ನ ಓದ್ತಿದ್ದೀವಿ
ಅಂತಾ ಒಳಗೊಳಗೆ ಅದೆಷ್ಟು ದಿನಾ
ನಕ್ಕಿದ್ವೋ ಗೊತ್ತಿಲ್ಲ...
ಇವತ್ತು
ನಾನು ಓದಿದ್ದಕ್ಕೂ ಮಾಡ್ತಾ ಇರೋ
ಕೆಲಸಕ್ಕೂ ಸಂಬಂಧವೇ ಇಲ್ಲಾ..
ಆದ್ರೆ
ಅಲ್ಲಿ ಕಲಿತ ವಿದ್ಯೆ ನನಗೆ ಇವತ್ತಿಗೂ
ಸಹಾಯ ಮಾಡ್ತಾ ಇದೆ...
ಮನೆಯಲ್ಲಿ
ನನ್ನದೇ ಸಣ್ಣದೊಂದು ಗ್ರಂಥಾಲಯ
ಮಾಡ್ಕೊಂಡಿದ್ದೀನಿ ಅಷ್ಟರ ಮಟ್ಟಿಗೆ
ಓದಿದ್ದನ್ನು ಸಾಕಾರ ಮಾಡ್ಕೊಳ್ಳೋ
ಪ್ರಯತ್ನ...
ಇಷ್ಟೆಲ್ಲಾ
ಕಲಿಸಿದ ಗುರುವೃಂದದವರಿಗೆ ಶರಣು
ಶರಣಾರ್ಥಿ...
ಬೈಯುತ್ತಲೇ
ನಮಗೆಲ್ಲಾ ಇಷ್ಟವಾಗಿದ್ದ ವೈ.
ವೆಂಕಟೇಶ್
ಸರ್..
Personality Development Class ಮೂಲಕ
ನಮಗೆ ಪರಿಚಯವಾಗಿ ಆಮೇಲೆ UDC
ಹೇಳಿಕೊಟ್ಟ
ಆದಿತ್ಯ ಕುಮಾರಿ ಮೇಡಂ..
There is NO FREE LUNCH in Life ಅಂತಾ
Management
ಹೇಳಿಕೊಟ್ಟ
ಖೈಸರ್ ನಿಕಂ ಮೇಡಂ...
Cataloging ಹೇಳಿಕೊಟ್ಟ
ಕುಂಬಾರ್ ಸರ್...
OK OK ಅಂತಾ
ಸದಾ ಆತ್ಮವಿಶ್ವಾಸದಿಂದ ಪುಟಿಯಿತ್ತಿದ್ದ
ಚಂದ್ರಶೇಖರ್ ಸರ್...
ಇವತ್ತಿಗೂ
Information...
Information Retrieval ಅಂದಾಕ್ಷಣ
ಥಟ್ಟನೇ ನೆನಪಾಗೋ ಹರಿನಾರಾಯಣ್
ಸರ್..
ಸ್ವಲ್ಪ
ದಿನ ಪಾಠ ಮಾಡಿ ಉಪಕುಲಪತಿಗಳಾದ
ತಳವಾರ್ ಸರ್..
ಎಲ್ಲರನ್ನೂ
ನೆನೆಯುತ್ತಾ ಅಲ್ಲಿರಲಾರದ
ಸಂಕಟಕ್ಕೆ ಸಮಾಧಾನ ಮಾಡ್ಕೋತೀನಿ...
ಆ
2
ವರ್ಷಗಳು
ನಿಜವಾಗಿಯೂ ನಮ್ಮ ಜೀವನದ ಸುವರ್ಣ
ವರ್ಷಗಳು...
50ರ
ವಸಂತಕ್ಕೆ ಕಾಲಿಡ್ತಿರೋ ಆ
ಚಿರಯೌವ್ವನಿಗನಿಗೆ ನನ್ನ ಕಡೆಯಿಂದ
ಶುಭಾಷಯ....
superb bro
ReplyDeleteThank You
ReplyDelete