ಬೆತ್ತಲ ಬೆಳಕು...
.................................................................................................................................................
ಸುತ್ತಲೂ
ಕಗ್ಗತ್ತಲು...
ಎತ್ತ
ತಿರುಗಿದರೂ ಕಪ್ಪು..
ಗಾಢ
ಮೌನ...
ಎಲ್ಲಿರುವೆ
ನಾನು...?
ದೂರದಲ್ಲೆಲ್ಲೋ
ಚೂರು ಬೆಳಕು..
ಬೆಳಕಿನಡಿಯಲ್ಲಿ
ನಡೆಯುತ್ತಲೇ ಇದೆ ನರಮೇಧ..
ಅಬ್ಬಾ..
ರಕ್ತ..
ಚೀರಾಟ...
ಕೇಳುವವರಿಲ್ಲವೇ
ಯಾರೂ...
ಎಲ್ಲಿರುವೆ
ನಾನು..?
ತುಸು
ದೂರ ನಡೆದರೆ ಸಿಕ್ಕೇ ಬಿಡುವುದು
ಊರು,
ಸೂರಿಲ್ಲ..
ಕೂಳಿಲ್ಲ...
ಏನೆಂದರೆ
ಏನೂ ಇಲ್ಲ..
ಎಲ್ಲ
ಕಳೆದುಕೊಂಡಿಹ ಮಂದಿಗೆ
ಗತಿಯಿಲ್ಲವೇ
ಯಾರೂ
ಎಲ್ಲಿರುವೆ
ನಾನು...?
ಒಂದೆಡೆ,
ಮೌನ
ಭೇಧಿಸಿ ಅಬ್ಬರದ ಪ್ರಚಾರ
ಹೆಂಡದ
ಮತ್ತಿನಲ್ಲಿ ಮುಗ್ಧ ಮತದಅರ
ದಅರಿ
ತಪ್ಪಿಸುತಿಹನೊಬ್ಬ ಸರದಾರ
ಮಗುಲಲ್ಲಿ,
ಬೆನ್ನಿಗಂಟಿದ
ಹೊಟ್ಟೆಯ
ಎಲುಬಿನಾ
ಗೂಡೊಂದು
ಪರಿತಪಿಸುತ್ತಲಿದೆ
ಎಲ್ಲಿರುವೆ
ನಾನು...?
ಬೀದಿಯ
ತುಂಬಾ ಮೈಚಾಚಿದಾ ಮಲ್ಲಿಗೆ
ದೇಹದಾಹವ
ತೀರಲು
ಬಗೆ
ಬಗೆದು ಬಯಸಿಹನು
ಹೆಣ್ಣ
ಜೀವ ಹಿಂಡುತ್ತಾ
ತನ್ನತನವ
ಬಲಿಕೊಡುತ್ತಿಹಳೊಬ್ಬಳು
ನೂರರ
ನೋಟಿಗೆ
ಮನೆಯಲ್ಲಿ
ಹಾಲಿಲ್ಲದೇ ಕೊರಗುತ್ತಿಹ ಕಂದನ
ನೆನಯುತ್ತಾ..
ಕತ್ತಲೇ
ಲೇಸೆಂದು ಬಗೆದು
ಹಿಂತಿರುಗಿದೆ,
ಕಾಗರ್ತ್ತಲ
ಗರ್ಭಕ್ಕೆ
ಛೀ,
ಮಾನವ...
ವಿಷಯಲಂಪಟ
ನೀನೆಂದು
ನೂಕಿಯೇ
ಬಿಟ್ಟಿತು
ಬೆತ್ತಲ
ಬೆಳಕಿಗೆ.....
No comments:
Post a Comment